Monday, June 3, 2013

ಸಾಫ್ಟ್ವೇರ್ ಉದ್ಯೋಗಿಗಳು ಹಾಗೂ ವರ್ಗ ಸಂಘರ್ಷ!!

ಸಾಫ್ಟ್ವೇರ್ ಉದ್ಯೋಗಿಗಳು ಹಾಗೂ ವರ್ಗ ಸಂಘರ್ಷ!!
V.r. Bhat ಲೇಖನದ ಸ್ಟೇಟಸ್ ಅಪ್ಡೇಟ್ ಮಾತ್ರ ನೋಡಿದ್ದ ನನಗೆ ಅ. ಅಷ್ಟನ್ನೇ ಓದಿದ ನನಗೆ ಮೈ ಉರಿದು ಹೋಯಿತು. ನಂತರ ಸಂಜೆ ಪೂರ್ತಿ ಲೇಖನ ಓದಿದಾಗ ಅವರ ಮಾತು ಸರಿ ಅನಿಸಿತು. ಆದರೆ ಅವರು ಒಂದು ಬಹುಮುಖ್ಯವಾದ ಅಂಶವನ್ನು ಬಿಟ್ಟಿದ್ದೇ ಈ ಕನ್ಫ್ಯೂಷನ್ ಗೆ ಕಾರಣ ಎಂದು ನನ್ನ ಅನಿಸಿಕೆ. ಅದೆಂದರೆ ಸಾಫ್ತ್ವರ್ ಉದ್ಯೋಗಿಗಳಲ್ಲಿ ಉಂಟಾದ ವರ್ಗ ಹಾಗು ಅವರ ಮಧ್ಯ ಹೆಚ್ಚಾಗುತ್ತಿರುವ ಕಂದಕ.  ಅವರ ಲೇಖನದ ಕೊಂಡಿ : http://nimmodanevrbhat.blogspot.in/2013/06/blog-post.html )

ಭಟ್ಟರು  ಹೇಳಿದ್ದು ಅಕ್ಷರಶಃ ಸತ್ಯ. ಇದನ್ನು ಕೆಲವು ಸೋಫ್ತ್ ವೆರಿ ಗಳು ಅರಗಿಸಿಕೊಳ್ಳಲು ಕಷ್ಟ ಪಡುತ್ತಿರಬಹುದು. ಆದರೆ ಒಂದು ಮಾತಂತೂ ಸತ್ಯ. ಇಂದು ಸಾಫ್ಟ್ವೇರ್ ನಲ್ಲಿಯೂ ಎರಡು ವರ್ಗಗಳು ಶ್ರಿಷ್ಟಿಯಾಗುತ್ತಿವೆ. ಒಂದು ಹೈ ಫಿ ವರ್ಗವಾದರೆ ಇನ್ನೊಂದು ಕಾರ್ಮಿಕರಂಥ ವರ್ಗ. 

ತೊಂಬತ್ತರ ದಶಕದಲ್ಲಿ ಸಾಫ್ಟ್ವೇರ್ ಇನ್ನೂ ಗಣಿತದಲ್ಲಿ ನೂರಕ್ಕೆ ತೊಂಬತ್ತು ಪರೆದವರ ಸ್ವಾತ್ತಗಿದ್ದಾಗ ಸೇರಿದವರು ಇಂದು ಕೊಟ್ಯಧೀಷರು. ಗ್ರೀನ್ ಕಾರ್ಡ್ ಎಚ್.ಒನ್.ಬಿ. ವಿಸಾ ದಲ್ಲಿ ವಿದೇಶದಲ್ಲಿ ಇದ್ದು, ಇರುವ, ಡಾಲರ್ ನಲ್ಲಿ ಸಂಬಳ ಗಳಿಸುವ ವರ್ಗ ಒಂದಾದರೆ, ರಾಜ್ಯದ ತುಂಬಾ ಇರುವ ನೂರೆಂಟು ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿ, ಕ್ಯಾಂಪಸ್ ಸೆಲೆಕ್ಷನ್ ಎಂಬ ಜಾತ್ರೆಯಲ್ಲಿ ಅವಕಾಶ ಗಿಟ್ಟಿಸಿ, ಮೂರು ನಾಲ್ಕು ತಿಂಗಳು ಟ್ರೇನಿಂಗ ನಲ್ಲಿ ಕೊಳೆತು, ಮುಂದೆ ಮೂರ್ನಾಲ್ಕು ತಿಂಗಳು ಬೆಂಚ್ ಎಂಬ ಥ್ಯಾಂಕ್ ಲೆಸ್ ಕೆಲಸ ಮಾಡಿ, ಇಪ್ಪತ್ತರಿಂದ ಇಪ್ಪತೈದು ಸಾವಿರ ಗಳಿಸುವ ಇನ್ನೊಂದು ವರ್ಗ. ಇದನ್ನು ಕ್ಯಾಟಲ್ ಕ್ಲಾಸ್ ವರ್ಗ ಎನ್ನಬಹುದು.

ಆಶ್ಚರ್ಯಕರ ಸಂಗತಿಯೆಂದರೆ ಮೊದಲ ವರ್ಗ ಇಂದೂ ಮಡಿವಾಳದಿಂದ ಇ ಸಿಟಿಗೆ ೨೫೦-೩೦೦ ರೋ ಕೊಟ್ಟು ಆಟೋದಲ್ಲಿ ಸಂತೋಷದಿಂದ ಹೋಗತ್ತೆ, ಅಥವಾ ಇ ಸಿಟಿ ಗೇಟ್ ನಿಂದ ತಮ್ಮ ಕಂಪನಿಯ ಗೇಟ್ ವರೆಗೆ ಆರಾಮವಾಗಿ ನೂರು ರೋ ಕೊಟ್ಟು ಈಗಲೂ ಹೋಗುವವರನ್ನು ನಾನು ನೋಡಿದ್ದೇನೆ. ಇವರು ಒಂದೋ ತೊಂಬತ್ತರ ದಶಕದಲ್ಲಿ ಸಾಫ್ಟ್ವೇರ್ ಸೇರಿಕೊಂಡವರು, ಅಥವಾ ಒಳ್ಳೆಯ ಎ ಗ್ರೇಡ್ ಕಾಲೇಜಿನಿಂದ ಬಂದವರು. ಇಂಥವರು ಸುಮಾರು ೨೦ ಪ್ರತಿಶತ ಇರಬಹುದು. ಇನ್ನೊಂದು ವರ್ಗವನ್ನು ನೋದಬೇಕಂದ್ರೆ ಸಂಜೆ ೬-೮ ರ ವರೆಗೆ ಇ ಸಿಟಿ, ಮಡಿವಾಳ, ಮಾರತ್ ಹಳ್ಳಿ ಸಿಟಿ ಬಸ್ ಸ್ಟಾಪ್ ಗಳಲ್ಲಿ ಸುಮ್ನೆ ಅಬ್ಸೆರ್ವೆ ಮಾಡಬಹುದು. ದೊಡ್ಡ ಜಾತ್ರೆಯೇ ಅಲ್ಲಿ ನೆರೆದಿರತ್ತೆ. ಸಿಕ್ಕ ಸಿಕ್ಕ ಸಿಟಿ ಬಸ್ಸುಗಳಲ್ಲಿ ನೇತಾಡುತ್ತಾ, ಪಿಕ್ ಪಕೆಟ್ಗೆ ಈಡಾಗುತ್ತಾ , ಇದ್ದುದರಲ್ಲೇ ಲಕ್ಕು ಇದ್ದವರು ಕಂಪನಿ ಬಸ್ಸಿನಲ್ಲಿ ಕಂಪನಿಯ ಟ್ರಾನ್ಸ್ಪೋರ್ಟ್ ಚಾರ್ಜ್ ತೆತ್ತು ದಿನವೂ ಒಂದು ಹೋರಾಟ ವೆಂಬಂತೆ ಬದುಕುತ್ತಿರುವುದು.

ಮೊದಲ ವರ್ಗದಲ್ಲಿಯೇ ಎರಡು ಉಪ ವರ್ಗವನ್ನೂ ಮಾಡಬಹುದು. ಒಂದು ಇನ್ನೂ “ದೇಸಿ” ಗುಣಗಳನ್ನು ಉಳಿಸಿಕೊಂಡ ವರ್ಗ. ಅದು ತಿಂಡಿ ಕಾಪಿಗೆ ಹೋಗುವದು MTR, ಮಯ್ಯಾಸ್ ತರಹದ “ನಮ್ಮ ಸಂಸ್ಕೃತಿ”ಯನ್ನು ಬಿಂಬಿಸುವ ದುಬಾರಿ ಹೋಟೆಲ್ ಗಳಿಗೆ. ಇನ್ನೊಂದು ವರ್ಗ ಸ್ಟಾರ್ ಬಕ್ ನಲ್ಲಿ ಕಾಪಿ ಹೀರುವದು. ಈ ಎರಡೂ ವರ್ಗಗಳು ಮಾರುವವರ ಡಾರ್ಲಿಂಗ್ ಗಳು. ನೂರು ಐನೋರರ ನೋಟು ಕೊಟ್ಟು ಚಿಲ್ರೆ ಇಟ್ಕೋ ಅನ್ನುವದು ಈ ವರ್ಗದ ಜಾಯಮಾನ. ಭಟ್ಟರು ತಮ್ಮ ಲೇಖನದಲ್ಲಿ ಎ ವರ್ಗಕ್ಕೆ ಸೇರಿಸಿದ್ದೂ ಇದೇ ವರ್ಗವನ್ನೇ.

 ದುರ್ಭಗ್ಯದ ಸಂಗತಿಯೆಂದರೆ ಈಗ ಎರಡನೆಯ ಕ್ಯಾಟಲ್ ಕ್ಲಾಸ್ ವರ್ಗ ಕೂಡ ಮೊದಲನೆಯ ಕ್ಯಾಪಿಟಲ್ ಕ್ಲಾಸ್ ವರ್ಗವನ್ನು ಹಿಮ್ಬಾಲಿಸುತ್ತಿರುವದು! ೪೯ ರೂಪಾಯಿಯ ಬರ್ಗರ್, ೫೫ ರೂಪಾಯಿಯ ಪಿಜ್ಜಾ, ೯೯ ರೂಪಾಯಿಯ ಕೆ ಎಪ್ ಸಿ ಯ ಕೊಡುಗೆಗಳು ಇರುವದೇ ಇಂಥವರಿಗಾಗಿ! ಇದೇನು ಇವರ ಮೇಲಿನ ಕರುಣೆಗಾಗಿಯಲ್ಲ. ಸುಮ್ನೆ ಒಳಕ್ಕೆ ಕರೆದುಕೊಳ್ಳಲು ಮಾತ್ರ. ಒಮ್ಮೆ ಒಳಗೆ ಕಾಲಿಟ್ಟು ೯೯ ರೂಪಾಯಿಯ ಬರ್ಗರ್ ರುಚಿ ಹತ್ತಿದ ಮೇಲೆ ೨೫೦ ರೋ ಬರ್ಗರ್ ಬಿಡ್ತಾನಾ? (೨೦ ರೋ ಪಾಕೀಟ್ ಸಾರಾಯಿ ಕುಡಿಯುತ್ತಿದ್ದವನು ಸಾರಾಯಿ ನಿಷೇಧದಿಂದ ಐವತ್ತು ರೋ ಕಂಟ್ರಿ ವಿಸ್ಕಿ ಕುಡಿದ ಹಾಗೇ!). ಹೀಗಾಗಿ ಈಗಿನ ಯುವಕರಲ್ಲಿ ಇದೊಂದು ಕೊಳ್ಳುಬಾಕ ಸಂಸ್ಕೃತಿ ಬೆಳೆಯುತ್ತಿದ್ದರೆ ಅದಕ್ಕೆ ಮೊದಲ ವರ್ಗದ ಪ್ರಭಾವ ಒಂದು ಗಣನೀಯ ಕಾರಣ.

ಹಾಗೂ ಅನ್ಯಗ್ರಹದ ಜೀವಿಗಳೆಂದು ಹಣೆಪಟ್ಟಿ ಹೊರುವವರೂ ಐರೊನಿಕಲಿ ಈ ಕ್ಯಾಟಲ್ ಕ್ಲಾಸ್ ವರ್ಗವೇ!!

No comments: