Monday, April 30, 2012

ಕ ಸಾ ಪ ಚುನಾವಣೆ ಮತ್ತು ಪತ್ರಕರ್ತರ ಕ್ರೆಡಿಬಿಲಿಟಿ ....


ನೆನ್ನೆ ಕ ಸಾ ಪ ಚುನಾವಣೆ ನಡೆಯಿತಷ್ಟೇ. ಬೆಳಗಾವಿಯ ಜಿಲ್ಲೆಯಿಂದ ಉಮೆದುವಾರ ರಾಗಿದ್ದವರು ಒಬ್ಬ ಪತ್ರಿಕಾ ಸಂಪಾದಕ, ಒಬ್ಬ ಡೀಸೀ ಆಫೀಸ್ ಗುಮಾಸ್ತ ಹಾಗೂ ಒಬ್ಬ  ಕಾಲೇಜು ನಡೆಸುವ ಸ್ವಯಂ ಸೇವಕ! ಎಲ್ಲರೂ ತಮ್ಮ ಕ್ಷೇತ್ರದಲ್ಲಿ ಜಿಲ್ಲಾ ಮಟ್ಟದಲ್ಲಿ ಘಟಾನುಘಟಿಗಳು. 

ಸಹಜವಾಗಿ ಜಿಲ್ಲೆಯ ಪತ್ರಿಕೆಯಲ್ಲೆಲ್ಲ ಪತ್ರಿಕಾ ಸಂಪಾದಕನ ಅಲೆ. ಅವನ ಪತ್ರಿಕೆ ಹೊರತು ಪಡಿಸಿ ಉಳಿದ ಪತ್ರಿಕೆಗಳಲ್ಲೂ ಅವನದ್ದೇ ಕಾರುಬಾರು! ಜಿಲ್ಲೆಯ ವಿವಿಧ ತಾಲೂಕಿನ ಬಿಡಿ ವರದಿಗಾರರ ಕೂಟ, ಸಂಘದವರು ತಾವೇ ೧೫-೨೦ ಜನ ಸೇರಿ ತೆಗೆದ ಪತ್ರಿಕಾ ಸಂಪಾದಕನನ್ನು ಬೆಂಬಲಿಸುವ ನಿರ್ಧರವೇ ಪತ್ರಿಕೆಯ ತುಂಬೆಲ್ಲ ಬಹುಜನತೆಯ ನಿರ್ಧರವೆಮ್ಬಂತೆ ಬಿಂಬಿತ!
ಚುನಾವಣೆಯ ದಿನ ಈ ಪತ್ರಿಕಾ ಸಂಪಾದಕನ ಗುಂಪಿನ ಕಡೆಯವರು ಹಾಕಿದ ಪೆಂಡಾಲು, ಹೆಸರನ್ನು ಹುಡುಕಿ ಚೀಟಿಯಲ್ಲಿ ಸೀರಿಯಲ್ ನಂಬರ್ ಬರೆದು ಕೊಡುವದೂ ಯಾವ ಮುನಿಸಿಪಾಲಿಟಿ ಚುನಾವಣೆಯನ್ನೂ ನಾಚಿಸುವಂತಿತ್ತು!!

ಈ ಸಂಧರ್ಭದಲ್ಲಿ ತಾಲೂಕಿನ ಮತಗಟ್ಟೆಯೊಂದರಲ್ಲಿ  ಇಬ್ಬರು ಮಾತನಾಡುವ ಒಂದು ಪಿಸುಗುಟ್ಟುವ ಧ್ವನಿ ಕೇಳಿಬಂದಿತು. ಅದು ಹೀಗಿದೆ..
“ಈ ಪತ್ರಕರ್ತರು ಜನರ ಉದ್ಹಾರ ಮಾಡುವದು ಅಷ್ಟರಲ್ಲೇ ಇದೆ. ಇವರ ಜನಪರ ಕಾಳಜಿಯೂ ಅಷ್ಟರಲ್ಲೇ ಇದೆ! ಈ ಮಕ್ಕಳು ಪತ್ರಿಕಾ ವರದಿಗಾರಿಕೆಗಿಂತ ಪೋಲಿಸ್ ಸ್ಟೇಷನ್ ನಲ್ಲಿ ಡೀಲಿಂಗ್ ಮಾಡಿದ್ದೆ ಹೆಚು. ಲಾಭವಿಲ್ಲದೇ ಪತ್ರಿಕೆಗಳಲ್ಲಿ ಬರೆದದ್ದೇ ಅಪರೂಪ. ತಮ್ಮದೇ ಒಂದು ಕಾರ್ಟೆಲ್ ನಿರ್ಮಿಸಿಕೊಂಡಿರುವ ಇವರು ತಾವು ಹೇಳಿದ್ದೆ ವೇದವಾಕ್ಯ ಎಂದುಕೊಂಡಿದ್ದಾರೆ. ತಾವೇ ಒಂದು ೧೫-೨೦ ಜನ ತೆಗೆದುಕೊಂಡು ತಮ್ಮ ಗುಂಪಿನ ಗುರುವನ್ನು ಬೆಮ್ಬಲಿಸಿದ್ದನ್ನೇ ದೊಡ್ಡದಾಗಿ ತಮ್ಮ ತಮ್ಮ ಪೇಪರ್ನಲ್ಲಿ ಕಾಕಿಕೊಂಡಿದ್ದಾರೆ. ಇವರಿಗೆ ಒಮ್ಮೆ ಬುದ್ಧಿ ಕಲಿಸಬೇಕು”

ಕೊನೆಗೆ ಫಲಿತಾಂಶ ಪ್ರಕಟಗೊಂಡಾಗ ಪತ್ರಿಕಾ ಸಂಪಾದಕ ಸೋತು ಡೀ ಸೀ ಆಫೀಸ್ ಗುಮಾಸ್ತ ಗೆಲುವಿನ ನಗೆ ಬೀರಿದ್ದರು!!
ಎಲ್ಲಿಗೆ ಬಂದಿತು ಪತ್ರಕರ್ತರ ಕ್ರೆಡಿಬಿಲಿಟಿ ಜಿಲ್ಲಾ, ತಾಲೂಕು ಕೇಂದ್ರಗಳಲ್ಲೂ??