Tuesday, July 24, 2012

ಕೆಎಸ ಆರ್ ಟಿ ಸಿ ದಕ್ಷತೆಗೆ ಅಧಿಕಾರಿಗಳು ಕಾರಣವೇ ಹೊರತು ಸಚಿವರಲ್ಲ!


ಅಧಿಕಾರಿಗಳು ಮನಸ್ಸು ಮಾಡಿದರೆ ಯಾವ ರೀತಿ ಒಂದು ಮಾದರಿ ಸಂಸ್ಥೆಯನ್ನು ಕಟ್ಟಬಹುದು ಎಂಬುದಕ್ಕೆ ಪ್ರಚಲಿತ ಕೆಎಸ ಆರ್ ಟಿ ಸಿ ಒಂದು ಜೀವಂತ ಉದಾಹರಣೆ.ಕೆಲ ಸುನ್ಸ್ಥೆಗಳಿಂದ ರಾಜಕಾರಣಿಗಳು, ಅಥವಾ ಮಂತ್ರಿಗಳು ಪ್ರಸಿದ್ಧಿ ಪಡೆಯುತ್ತಾರೆ ಅನ್ನುವದಕ್ಕೆ ಪ್ರಶಸ್ತ ಉದಾಹರಣೆ ನಮ್ಮ ಸಾರಿಗೆ ಸಂಸ್ಥೆ. ಇದು ನಾಲ್ಕು ಭಾಗವಾದಾಗಿನಿಂದ ನಾಲ್ಕೂ ಸಂಸ್ಥೆಗಳು ತಮ್ಮ ಪ್ರಗತಿಯ ದೆಸೆಯನ್ನೇ ಬದಲಿಸಿದವು ಎಂದು ಹೇಳಬಹುದು. ಇಂದು ಕೆಎಸ ಆರ್ ಟಿ ಸಿ ರಾಜ್ಯದ ಒಂದು ಪ್ರತಿಷ್ಟಿತ ಸಂಸ್ಥೆಯಾಗಿದ್ದಲ್ಲಿ ಅದಕ್ಕೆ ಅಧಿಕಾರಿಗಳ ಶ್ರಮ ಕಾರಣವೇ ಹೊರತು ಸಾರಿಗೆ ಸಚಿವರಲ್ಲ. ಇಂದು ಒಬ್ಬ ಸಚಿವನ ವರ್ಚಸ್ಸನ್ನು ವ್ರುದ್ದಿಸುವಷ್ಟು ಕೊಡುಗೆಯನ್ನು ಕೊಡುತ್ತಿರುವ ಬಹುಶ ಒಂದೇ ಸಂಸ್ಥೆಯೆಂದರೆ  ಕೆಎಸ ಆರ್ ಟಿ ಸಿ  ಎಂದು ಹೇಳಬಹುದು. ಇದಕ್ಕೆ ನಾವು ಅಧಿಕಾರಿಗಳನ್ನು ಅಭಿನಂದಿಸಬೇಕೆ ಹೊರತು ಸಚಿವರನ್ನಲ್ಲ. ಸಾರಿಗೆ ಸಚಿವರ ಒಂದೇ ಕೊಡುಗೆಯೆಂದರೆ ಹಸ್ತ ಕ್ಷೆಪವಿಲ್ಲದೆ ಅಧಿಕಾರಿಗಳಿಗೆ ಕೆಲಸಮಾಡಲು ಬಿಟ್ಟದ್ದು. 
ಇಂದು ಕಾಣುತ್ತಿರುವ ಐರಾವತ ದಂಥ ಐಷಾರಾಮಿ ಬಸ್ಸುಗಳು ಈಗಿನ ಸಾರಿಗೆ ಸಚಿವರು ಬರುವ ಎಷ್ಟೋ ವರ್ಷ ಮೊದಲೇ ಜಾರಿಗೆ ಬಂದಂಥವು. ಇನ್ನೂ ದಕ್ಷ ಕಾರ್ಯಾಚರಣೆಗೆ ಸಾರಿಗೆ ಸಚಿವರೇನು ಬಸ್ ನಿಲ್ದಾಣದಲ್ಲಿ ಹೋಗಿ ನಿಂತು ಟೀಸೀ ಕೆಲಸ ಮಾಡುವದಿಲ್ಲ. ಸಾರಿಗೆ ಸಚಿವರು ಮಾಡುವ ಒಂದೇ ಕಾರ್ಯವೆಂದರೆ ಅಧಿಕಾರಿಗಳು ಕರೆದಾಗ ಹೋಗಿ ಪತ್ರಿಕಾ ಗೋಷ್ಠಿ ನಡೆಸುವದು ಹಾಗು ದಿಲ್ಲಿಗೆ ಹೋಗಿ ಪ್ರಶಸ್ಥಿಗಳನ್ನು ತರುವದು. ದಕ್ಷತೆಯನ್ನು ಒಂದು ಕೆಲಸದ ಭಾಗವಾಗಿ ಅಂಥದೇ ಸಂಸ್ಕೃತಿಯನ್ನು ಬಿತ್ತಿ ಯಾವುದೇ ಕಾರ್ಪೊರೇಟ್ ಸಂಸ್ಥೆಗೂ ಕಮ್ಮಿ ಇಲ್ಲದಂತೆ ಅತ್ಯಂತ ಆಧುನಿಕತೆಯನ್ನು,  ನಾಳೆಯ ತಂತ್ರಜ್ಞ್ಯಾನವನ್ನು ಇಂದೇ ಅಳವಡಿಸುತ್ತ ರಾಜ್ಯದ ಒಂದು ಹೆಮ್ಮೆಯ ಸುನ್ಸ್ಥೆಯನ್ನಗಿ ಮಾಡಿದ ಸರ್ಕಾರಿ ಅಧಿಕಾರಿಗಳಿಗೆ ಒಂದು ಸಲಾಂ.

Friday, July 20, 2012

ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ನಿಜಕ್ಕೂ ಭಾರವೇ?


ಯುನೆಸ್ಕೋ ಪಶ್ಚಿಮ ಘಟ್ಟಕ್ಕೆ ವಿಶ್ವ ಪಾರಂಪರಿಕ ಸ್ಥಾನ ಮಾನ ನೀಡಿದ್ದಕ್ಕೆ ಪರ ವಿರೋಧ ವ್ಯಾಪಕ ಚರ್ಚೆ ನಡೆಯುತ್ತಿದೆ. ಕೆಲ ಜನ ಇದೊಂದು ಪರದೇಶಿಯರ ಆಕ್ರಮಣವೆಂಬಂತೆ ನೋಡುತ್ತಿದ್ದಾರೆ. ಅನೇಕ ಬ್ಲಾಗ್ ಗಳಲ್ಲಿ ಚರ್ಚೆ ಜೋರಾಗಿ ನಡೆಯುತ್ತಿದೆ. ಜೊತೆಗೆ ಯುನೆಸ್ಕೋ ಹೇಗೆ ಜನವಿರೋಧಿಯಾಗಿದೆ ಎಂದು ತಿಳಿಸಲು ಹಂಪಿ, ಅಸ್ಸಾಂನ ಯೋಜನೆಗಳನ್ನೂ ಉದಾಹರಣೆಯಾಗಿ ಕೊಡುತ್ತಿದ್ದಾರೆ.

ಹಂಪಿಯ ವಿಷಯಕ್ಕೆ ಬಂದಾಗ ಉನೆಸ್ಕೋ ನೀಡಿದ ಸಲಹೆ ಎಂದರೆ  Stop illegal constructions within the property and the buffer zone area (namely in Hampi Village and Virupapura Gada Island), and control and manage other planned developments, such as social housing projects, to ensure that they do not have a negative impact on the integrity of the landscape...
ಇದರಲ್ಲಿ ಏನಾದರು ತಪ್ಪಿದೆಯೇ? ಅದೇನು ವಸತಿ ಹೀನರಿಗೆ ಮನೆ ನಿರ್ಮಿಸದಂತೆ ಹೇಳುತ್ತಿಲ್ಲ. ಅದು ಹೇಳುತ್ತಿರುವದು ಐತಿಹಾಸಿಕ ಪರಂಪರೆಯ ಜಾಗಗಳಿಗೆ ಧಕ್ಕೆಯಾಗುವ ಯಾವುದೇ ಅಭಿರುದ್ದಿ ಕಮಗಾರಿಗಳನ್ನು ಕೈಗೆತ್ತಿಕೊಳ್ಳಬೇಡಿ ಎಂದು ಮಾತ್ರ. ಸರ್ಕಾರ ವಸತಿ ಹೀನರಿಗೆ ಮನೆ ನಿರ್ಮಿಸಲು ಐತಿಹಾಸಿಕ ಕಲ್ಲಿನ ದೇವಾಲಯಗಳೇ ಬೇಕೇ? ಶಿಲಾ ಶಾಸನ ಕತ್ತ್ತದಗಳಿಂದ ಅಥವಾ ಹಂಪೆಯಿಂದಲೇ ತುಸು ದೂರ ನಿರ್ಮಿಸಲು ಸಾಧ್ಯವಿಲ್ಲವೇ? ಹಾಗು ಹಾಗೇ ಐತಿಹಾಸಿಕ ಕಟ್ಟಡ, ಪರಂಪರೆಯ ಸುರಕ್ಷನೆಯೊಂದಿಗೆ ಅಭಿವ್ರುದ್ದಿಯನ್ನು ಮಾಡಬಹುದಲ್ಲವೇ? ಅದೆಲ್ಲ ಬಿಟ್ಟು ಒಂದು ಸಾಮಾನ್ಯ ಸಲಹೆಯನ್ನೇ ನಮ್ಮ ಸರ್ವಭುಮದ ಅಕ್ರಮನವೆಮ್ಬಂತೆ ಬಿಮ್ಬಿಸುತ್ತಾರಲ್ಲ ಇವರಿಗೇನು ಹೇಳಬೇಕು?

ಹಾಗೇ ಕೊಡುವ ಇನ್ನೊಂದು ಕಾರಣವೆಂದರೆ ಹಂಪೆಯಂತೆ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನವೂ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಅದರ ದಕ್ಷಿಣ ತುದಿಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 37ನ್ನು ಅಪ್‌ಗ್ರೇಡ್ ಮಾಡುವುದು ಸ್ಥಳೀಯರ ಹಿತ ದೃಷ್ಟಿಯಿಂದ ಅನಿವಾರ್ಯವಾಗಿತ್ತು. ಅದಕ್ಕೂ ಯುನೆಸ್ಕೊ ಕಲ್ಲು ಹಾಕಿದೆ. ಹಾಗೇ ಮುಂದೆ ನಮ್ಮ ಘಟ್ಟದ ರಸ್ತೆ ಅಭಿವ್ರುದ್ದಿಗೂ ಕಲ್ಲು ಹಾಕಲಿದೆ.

ಇದರಲ್ಲೂ ತಪ್ಪೇನಿದೆ? ಒಂದು ಪ್ರಕೃತಿ ಸಂಪತ್ಭರಿತ ಪ್ರದೇಶದ ಎದೆ ಸೀಳಿ two lane, four lane ರಸ್ತೆ ನಿರ್ಮಿಸಿದರೆ ಹಾಳಾಗುವದು ನಮ್ಮ ಪ್ರಕೃತಿ ಸಂಪತ್ತೆ ವಿನಃ ಮತ್ತೇನು ಅಲ್ಲ. ರಸ್ತೆ ಅಭಿವೃದ್ದಿಯಾಗಿ ಇಡೀ ಪ್ರದೇಶವನ್ನೇ ಎದೆ ಸೀಳಿದಂತೆ ಎರಡು ತುಂಡು ಮಾಡಿ ದೊಡ್ಡ ರಸ್ತೆಯಲ್ಲಿ ರಾತ್ರಿ ಹಗಲೆನ್ನದೆ ವಾಹನಗಳ ಓಡಾಟದಿಂದ ಅನೇಕ ವನ್ಯ ಜೀವಿಗಳು ಪ್ರಾಣ ಕಳೆದುಕೊಲ್ಲುವದನ್ನು ನಾವು ಈಗಾಗಲೇ ಕಾಣುತ್ತಿದ್ದೇವೆ. ಇದನ್ನು ತಪ್ಪಿಸಲು ಉನೆಸ್ಕೋ ಸಲಹೆ ಸರಿಯಾದದ್ದೇ ಅಲ್ಲವೇ? ಅದೂ ಅಲ್ಲದೆ ಊಟಿಯ ಹೆದ್ದಾರಿಯಲ್ಲಿ ಬಂಡಿಪುರದಲ್ಲಿ ವಾಹನಗಳ ರಾತ್ರಿ ಓಡಾತವನ್ನು ನ್ಯಾಯಾಲಯ ಇತ್ತೀಚಿಗೆ ನಿಷೆಧಿಸಿದೆ ಏಕೆ? ಇದೆ ಕಾರಣಕ್ಕೆ ಅಲ್ಲವೇ?
ಅಷ್ಟಕ್ಕೂ ಯಥಾಸ್ಥಿತಿ ಕಾಪದುವದೆಂದರೇನು? ಇದ್ದದ್ದನ್ನು ಸಂಭಾಳಿಸಿಕೊಂಡು ಹಾಳಾಗದಂತೆ ಕಾಪದುವದೆ ಅಲ್ಲವೇ. 

ಉನೆಸ್ಕೋ ವಿಶ್ವಪರಂಪರೆ ಪಟ್ಟಿಯಲ್ಲಿ ಸೇರಿದ ಪ್ರದೇಶದಲ್ಲೆಲ್ಲ ಪ್ರವಾಸೋದ್ಯಮ ವಿಫುಲವಾಗಿ ಬೆಳೆದ ಉದಾಹರಣೆಗಳಿವೆ. ಇದಕ್ಕೆ ಕಾರಣ ಅಂತರ್ ರಾಷ್ಟ್ರೀಯ ಪ್ರವಾಸಿಗರ ಬೈಬಲ್ ಎಂದರೆ ಒಂದು ಉನೆಸ್ಕೋ ವಿಶ್ವ ಪರಂಪರೆಯ ಪಟ್ಟಿ ಹಾಗು ಇನ್ನೊಂದು ಲೋನೆಲಿ ಪ್ಲಾನೆಟ್ ಎಂಬ  ವರ ಅನುಕೂಲಕ್ಕಾಗಿ 32 ಹೊಟೇಲ್‌ಗಳಾಗಿವೆ. ಸ್ಥಳೀಯರು ಅವರ ಸೇವೆಯನ್ನೇ ಉದ್ಯೋಗವಾಗಿ ಮಾಡಿಕೊಂಡಿದ್ದಾರೆ. ಇದರಲ್ಲಿ ತಪ್ಪೇನು?
ಯಾವುದೊ ಭಾವನಾತ್ಮಕ ವಿಚಾರಧಾರೆಗೆ ಬಿದ್ದು ನಮ್ಮ ಪ್ರಿಯರಿಟಿಗಳು ಏರು ಪೇರು ಆಗಬಾರದು. ಅರಣ್ಯದಲ್ಲಿ ವನವಾಸಿಗಳಿಗೆ ಉದ್ದಾರಕ್ಕೆ ಈ ಸರ್ಕಾರಗಳು ಅದೆಷ್ಟು ಮಾಡಿದೆ ಎನ್ನುವದು ಎಲ್ಲರಿಗೂ ಗೊತ್ತು. ದುಡ್ಡು ಮಾಡುವ ಸರ್ಕಾರಿ ಯೋಜನೆಗಳಿಗೆ ತೊಂದರೆಯಾದರೆ ಒಳ್ಳೆಯದೇ. ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿದರೆ ಯಾರ ಅಭಿವ್ರುದ್ದಿಯೂ ನಿಲ್ಲುವದಿಲ್ಲ. ಕಾಡಿನಲ್ಲಿರುವ ಪ್ರಾಣಿ ಪಕ್ಷಿ ಕೀಟ ಗಿಡ ಬಳ್ಳಿಗಳು, ಅಪೂರ್ವ  ಷಧಿ ಸಸ್ಯಗಳು ಬದುಕಿಕೊಳ್ಳುತ್ತವೆ. ಮೂಲನಿವಾಸಿಗಳ ವನವಾಸಿಗಳ ಬಗ್ಗೆ ಯಾರು ಮೊಸಳೆ ಕಣ್ಣೀರು ಸುರಿಸಬೇಕಿಲ್ಲ.  ಅವರ ಬಗ್ಗೆ ವಿಶ್ವ ಸಂಸ್ಥೆಯ ತಜ್ಞ ರಿಗಿಂತ  ಈ ಸ್ವಯಂ ಘೋಷಿತ ಪರಿಸರ ಪ್ರೇಮಿಗಳಿಗೆ ಜಾಸ್ತಿ ಗೊತ್ತಿದೆಯೇ ? ಪ್ರಕೃತಿ ಹಾಗೂಪರಿಸರದೊಂದಿಗೆ ಸಹಜೀವನ ಎಂದರೆ ನಿಂತನೀರಾಗಿರುವದಲ್ಲ  ಜವಾಬ್ದಾರಿಯಿಂದ ಮುಂದೆ ಹೋಗುವದು.   ಹಾಗೆ ಮಾಡದೆ ಹೋದರೆ ಇಡೀ ಜಗತ್ತಿಗೆ ಸೇರಿದ ಅಪೂರ್ವ ಸಂಪತ್ತನ್ನು ಅವಕಾಶ ಕೊಟ್ಟರು ಕಾಪಾಡದ ತಪ್ಪಿಗೆ ನಾವು ಜವಾಬ್ದಾರರಾಗುತ್ತೇವೆ . ಇದನ್ನು ಭವಿಷ್ಯ ವು ಕ್ಷಮಿಸಲಾರದು ವಿಶ್ವ ಪರಂಪರೆಯ ಮೂಲ ಉದ್ದೇಶವೇ ಇದು. 
Sources: Various websites n blogs.