ಅಧಿಕಾರಿಗಳು ಮನಸ್ಸು ಮಾಡಿದರೆ ಯಾವ ರೀತಿ ಒಂದು ಮಾದರಿ
ಸಂಸ್ಥೆಯನ್ನು ಕಟ್ಟಬಹುದು ಎಂಬುದಕ್ಕೆ ಪ್ರಚಲಿತ ಕೆಎಸ ಆರ್ ಟಿ ಸಿ ಒಂದು ಜೀವಂತ ಉದಾಹರಣೆ.ಕೆಲ
ಸುನ್ಸ್ಥೆಗಳಿಂದ ರಾಜಕಾರಣಿಗಳು, ಅಥವಾ ಮಂತ್ರಿಗಳು ಪ್ರಸಿದ್ಧಿ ಪಡೆಯುತ್ತಾರೆ ಅನ್ನುವದಕ್ಕೆ
ಪ್ರಶಸ್ತ ಉದಾಹರಣೆ ನಮ್ಮ ಸಾರಿಗೆ ಸಂಸ್ಥೆ. ಇದು ನಾಲ್ಕು ಭಾಗವಾದಾಗಿನಿಂದ ನಾಲ್ಕೂ ಸಂಸ್ಥೆಗಳು
ತಮ್ಮ ಪ್ರಗತಿಯ ದೆಸೆಯನ್ನೇ ಬದಲಿಸಿದವು ಎಂದು ಹೇಳಬಹುದು. ಇಂದು ಕೆಎಸ ಆರ್ ಟಿ ಸಿ ರಾಜ್ಯದ ಒಂದು
ಪ್ರತಿಷ್ಟಿತ ಸಂಸ್ಥೆಯಾಗಿದ್ದಲ್ಲಿ ಅದಕ್ಕೆ ಅಧಿಕಾರಿಗಳ ಶ್ರಮ ಕಾರಣವೇ ಹೊರತು ಸಾರಿಗೆ
ಸಚಿವರಲ್ಲ. ಇಂದು ಒಬ್ಬ ಸಚಿವನ ವರ್ಚಸ್ಸನ್ನು ವ್ರುದ್ದಿಸುವಷ್ಟು ಕೊಡುಗೆಯನ್ನು ಕೊಡುತ್ತಿರುವ
ಬಹುಶ ಒಂದೇ ಸಂಸ್ಥೆಯೆಂದರೆ ಕೆಎಸ ಆರ್ ಟಿ ಸಿ ಎಂದು ಹೇಳಬಹುದು. ಇದಕ್ಕೆ ನಾವು ಅಧಿಕಾರಿಗಳನ್ನು
ಅಭಿನಂದಿಸಬೇಕೆ ಹೊರತು ಸಚಿವರನ್ನಲ್ಲ. ಸಾರಿಗೆ ಸಚಿವರ ಒಂದೇ ಕೊಡುಗೆಯೆಂದರೆ ಹಸ್ತ ಕ್ಷೆಪವಿಲ್ಲದೆ
ಅಧಿಕಾರಿಗಳಿಗೆ ಕೆಲಸಮಾಡಲು ಬಿಟ್ಟದ್ದು.
ಇಂದು ಕಾಣುತ್ತಿರುವ ಐರಾವತ ದಂಥ ಐಷಾರಾಮಿ ಬಸ್ಸುಗಳು
ಈಗಿನ ಸಾರಿಗೆ ಸಚಿವರು ಬರುವ ಎಷ್ಟೋ ವರ್ಷ ಮೊದಲೇ ಜಾರಿಗೆ ಬಂದಂಥವು. ಇನ್ನೂ ದಕ್ಷ ಕಾರ್ಯಾಚರಣೆಗೆ
ಸಾರಿಗೆ ಸಚಿವರೇನು ಬಸ್ ನಿಲ್ದಾಣದಲ್ಲಿ ಹೋಗಿ ನಿಂತು ಟೀಸೀ ಕೆಲಸ ಮಾಡುವದಿಲ್ಲ. ಸಾರಿಗೆ ಸಚಿವರು
ಮಾಡುವ ಒಂದೇ ಕಾರ್ಯವೆಂದರೆ ಅಧಿಕಾರಿಗಳು ಕರೆದಾಗ ಹೋಗಿ ಪತ್ರಿಕಾ ಗೋಷ್ಠಿ ನಡೆಸುವದು ಹಾಗು ದಿಲ್ಲಿಗೆ
ಹೋಗಿ ಪ್ರಶಸ್ಥಿಗಳನ್ನು ತರುವದು. ದಕ್ಷತೆಯನ್ನು ಒಂದು ಕೆಲಸದ ಭಾಗವಾಗಿ ಅಂಥದೇ ಸಂಸ್ಕೃತಿಯನ್ನು ಬಿತ್ತಿ
ಯಾವುದೇ ಕಾರ್ಪೊರೇಟ್ ಸಂಸ್ಥೆಗೂ ಕಮ್ಮಿ ಇಲ್ಲದಂತೆ ಅತ್ಯಂತ ಆಧುನಿಕತೆಯನ್ನು, ನಾಳೆಯ ತಂತ್ರಜ್ಞ್ಯಾನವನ್ನು ಇಂದೇ ಅಳವಡಿಸುತ್ತ
ರಾಜ್ಯದ ಒಂದು ಹೆಮ್ಮೆಯ ಸುನ್ಸ್ಥೆಯನ್ನಗಿ ಮಾಡಿದ ಸರ್ಕಾರಿ ಅಧಿಕಾರಿಗಳಿಗೆ ಒಂದು ಸಲಾಂ.
No comments:
Post a Comment