ಇದರಲ್ಲಿ ಏನಾದರು ತಪ್ಪಿದೆಯೇ? ಅದೇನು ವಸತಿ ಹೀನರಿಗೆ ಮನೆ ನಿರ್ಮಿಸದಂತೆ ಹೇಳುತ್ತಿಲ್ಲ. ಅದು ಹೇಳುತ್ತಿರುವದು ಐತಿಹಾಸಿಕ ಪರಂಪರೆಯ ಜಾಗಗಳಿಗೆ ಧಕ್ಕೆಯಾಗುವ ಯಾವುದೇ ಅಭಿರುದ್ದಿ ಕಮಗಾರಿಗಳನ್ನು ಕೈಗೆತ್ತಿಕೊಳ್ಳಬೇಡಿ ಎಂದು ಮಾತ್ರ. ಸರ್ಕಾರ ವಸತಿ ಹೀನರಿಗೆ ಮನೆ ನಿರ್ಮಿಸಲು ಐತಿಹಾಸಿಕ ಕಲ್ಲಿನ ದೇವಾಲಯಗಳೇ ಬೇಕೇ? ಶಿಲಾ ಶಾಸನ ಕತ್ತ್ತದಗಳಿಂದ ಅಥವಾ ಹಂಪೆಯಿಂದಲೇ ತುಸು ದೂರ ನಿರ್ಮಿಸಲು ಸಾಧ್ಯವಿಲ್ಲವೇ? ಹಾಗು ಹಾಗೇ ಐತಿಹಾಸಿಕ ಕಟ್ಟಡ, ಪರಂಪರೆಯ ಸುರಕ್ಷನೆಯೊಂದಿಗೆ ಅಭಿವ್ರುದ್ದಿಯನ್ನು ಮಾಡಬಹುದಲ್ಲವೇ? ಅದೆಲ್ಲ ಬಿಟ್ಟು ಒಂದು ಸಾಮಾನ್ಯ ಸಲಹೆಯನ್ನೇ ನಮ್ಮ ಸರ್ವಭುಮದ ಅಕ್ರಮನವೆಮ್ಬಂತೆ ಬಿಮ್ಬಿಸುತ್ತಾರಲ್ಲ ಇವರಿಗೇನು ಹೇಳಬೇಕು?
ಹಾಗೇ ಕೊಡುವ ಇನ್ನೊಂದು ಕಾರಣವೆಂದರೆ ಹಂಪೆಯಂತೆ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನವೂ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಅದರ ದಕ್ಷಿಣ ತುದಿಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 37ನ್ನು ಅಪ್‌ಗ್ರೇಡ್ ಮಾಡುವುದು ಸ್ಥಳೀಯರ ಹಿತ ದೃಷ್ಟಿಯಿಂದ ಅನಿವಾರ್ಯವಾಗಿತ್ತು. ಅದಕ್ಕೂ ಯುನೆಸ್ಕೊ ಕಲ್ಲು ಹಾಕಿದೆ. ಹಾಗೇ ಮುಂದೆ ನಮ್ಮ ಘಟ್ಟದ ರಸ್ತೆ ಅಭಿವ್ರುದ್ದಿಗೂ ಕಲ್ಲು ಹಾಕಲಿದೆ.
ಇದರಲ್ಲೂ ತಪ್ಪೇನಿದೆ? ಒಂದು ಪ್ರಕೃತಿ ಸಂಪತ್ಭರಿತ ಪ್ರದೇಶದ ಎದೆ ಸೀಳಿ two lane, four lane ರಸ್ತೆ ನಿರ್ಮಿಸಿದರೆ ಹಾಳಾಗುವದು ನಮ್ಮ ಪ್ರಕೃತಿ ಸಂಪತ್ತೆ ವಿನಃ ಮತ್ತೇನು ಅಲ್ಲ. ರಸ್ತೆ ಅಭಿವೃದ್ದಿಯಾಗಿ ಇಡೀ ಪ್ರದೇಶವನ್ನೇ ಎದೆ ಸೀಳಿದಂತೆ ಎರಡು ತುಂಡು ಮಾಡಿ ದೊಡ್ಡ ರಸ್ತೆಯಲ್ಲಿ ರಾತ್ರಿ ಹಗಲೆನ್ನದೆ ವಾಹನಗಳ ಓಡಾಟದಿಂದ ಅನೇಕ ವನ್ಯ ಜೀವಿಗಳು ಪ್ರಾಣ ಕಳೆದುಕೊಲ್ಲುವದನ್ನು ನಾವು ಈಗಾಗಲೇ ಕಾಣುತ್ತಿದ್ದೇವೆ. ಇದನ್ನು ತಪ್ಪಿಸಲು ಉನೆಸ್ಕೋ ಸಲಹೆ ಸರಿಯಾದದ್ದೇ ಅಲ್ಲವೇ? ಅದೂ ಅಲ್ಲದೆ ಊಟಿಯ ಹೆದ್ದಾರಿಯಲ್ಲಿ ಬಂಡಿಪುರದಲ್ಲಿ ವಾಹನಗಳ ರಾತ್ರಿ ಓಡಾತವನ್ನು ನ್ಯಾಯಾಲಯ ಇತ್ತೀಚಿಗೆ ನಿಷೆಧಿಸಿದೆ ಏಕೆ? ಇದೆ ಕಾರಣಕ್ಕೆ ಅಲ್ಲವೇ?
ಅಷ್ಟಕ್ಕೂ ಯಥಾಸ್ಥಿತಿ ಕಾಪದುವದೆಂದರೇನು? ಇದ್ದದ್ದನ್ನು ಸಂಭಾಳಿಸಿಕೊಂಡು ಹಾಳಾಗದಂತೆ ಕಾಪದುವದೆ ಅಲ್ಲವೇ.
ಉನೆಸ್ಕೋ ವಿಶ್ವಪರಂಪರೆ ಪಟ್ಟಿಯಲ್ಲಿ ಸೇರಿದ ಪ್ರದೇಶದಲ್ಲೆಲ್ಲ ಪ್ರವಾಸೋದ್ಯಮ ವಿಫುಲವಾಗಿ ಬೆಳೆದ ಉದಾಹರಣೆಗಳಿವೆ. ಇದಕ್ಕೆ ಕಾರಣ ಅಂತರ್ ರಾಷ್ಟ್ರೀಯ ಪ್ರವಾಸಿಗರ ಬೈಬಲ್ ಎಂದರೆ ಒಂದು ಉನೆಸ್ಕೋ ವಿಶ್ವ ಪರಂಪರೆಯ ಪಟ್ಟಿ ಹಾಗು ಇನ್ನೊಂದು ಲೋನೆಲಿ ಪ್ಲಾನೆಟ್ ಎಂಬ ವರ ಅನುಕೂಲಕ್ಕಾಗಿ 32 ಹೊಟೇಲ್‌ಗಳಾಗಿವೆ. ಸ್ಥಳೀಯರು ಅವರ ಸೇವೆಯನ್ನೇ ಉದ್ಯೋಗವಾಗಿ ಮಾಡಿಕೊಂಡಿದ್ದಾರೆ. ಇದರಲ್ಲಿ ತಪ್ಪೇನು?
No comments:
Post a Comment